ಕೆ ಸಿ ಎಸ್ ಆರ್ ನಿಯಮಗಳ ಕನ್ನಡ PDF
ಇಲ್ಲಿ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ
Downloda 👈
ಆತ್ಮೀಯ ಲಿಂಗಸೂಗೂರು ತಾಲ್ಲೂಕಿನ ಶಿಕ್ಷಕ ಶಿಕ್ಷಕಿಯರೆ..
ನಮ್ಮದೊಂದು ಸಣ್ಣ ಕೆಲಸ ನಾವು ಅಂದುಕೊಂಡಿದ್ದಕ್ಕಿಂತ ತುಸು ಹೆಚ್ಚೆ ಎನ್ನುವಷ್ಟು ಯಶಸ್ಸನ್ನು ಪಡೆದಿದ್ದು ಈ ಹೊತ್ತಿನ ಸಂತಸಗಳಲ್ಲೊಂದು..
ಲಿಂಗಸೂಗೂರಿನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸದುಪಯೋಗವಾಗಲಿ ಎಂದು ಸ್ಯಾಲರಿ ಸ್ಲಿಪ್ ಗಳನ್ನು ಒಂದೆಡೆ ಸಿಗುವಂತೆ ಮಾಡುವುದು ನಮ್ಮ ಉದ್ದೇಶವಾಗಿತ್ತು.. ಅದರಂತೆ ಶುರುವಾದ ನಮ್ಮ ಕೆಲಸ ಇಂದಿಗೆ ಎರಡು ವರ್ಷಗಳ ಪೂರೈಸಿದೆ.
2021ಹಾಗೂ 2022 ನೇ ಇಸ್ವಿಯ ಎರಡು ವರ್ಷಗಳ ಎಲ್ಲಾ ವಲಯದ ಸ್ಯಾಲರಿ ಸ್ಲಿಪ್ ಗಳನ್ನು ಯಶಸ್ವಿಯಾಗಿ ಈ ಬ್ಲಾಗ್‌ನಲ್ಲಿ ಸೇರಿಸಿಡಲಾಗಿದೆ.
ಹಾಗೂ ಜನೆವರಿ 2023 ರ ವೇತನ ಸ್ಲಿಪ್ ಗಳನ್ನೂ ಸಹ ಅಪ್ಲೋಡ್ ಮಾಡಲಾಗಿದೆ
ಇಂದಿಗೆ ಅದರ ಸದುಪಯೋಗ ಪಡೆದುಕೊಂಡವರ ಸಂಖ್ಯೆ 8 ಸಾವಿರ ದಾಟಿ 9 ಸಾವಿರದ ಹತ್ತಿರಕ್ಕೆ ಬಂದಿದೆ... ಇಷ್ಟೊಂದು ವೀಕ್ಷಣೆ ನಮ್ಮ ಪೇಜ್ ಪಡೆದುಕೊಂಡಿದೆ ಎಂದರೆ ಅದು ನಮ್ಮ ಸಣ್ಣ ಕೆಲಸದ ಯಶಸ್ಸೆಂದೆ ಅನಿಸುತ್ತದೆ..
ಹಾಗೆಯೆ ಇದು ನಮಗೆ ಇನ್ನಷ್ಟು ಶಿಕ್ಷಕ ಸ್ನೇಹಿ ಕೆಲಸ ಮಾಡುವಲ್ಲಿ ಪ್ರೇರಣೆಯೂ ಆಗಿದೆ.
ತಮ್ಮ ಅಮೂಲ್ಯವಾದ ಸಲಹೆ ಸೂಚನೆ ಸಹಕಾರವನ್ನು ನಿರೀಕ್ಷಿಸುತ್ತೇವೆ.
ಧನ್ಯವಾದಗಳು.
ಶ್ರೀಗುರುಸಂಗಯ್ಯ ಗಣಾಚಾರಿ
ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ತಾಲೂಕು ಘಟಕ ಲಿಂಗಸೂಗೂರು.
ಆತ್ಮೀಯ ಗುರುಗಳೆ ಹಾಗೂ ಗುರುಮಾತೆಯರೆ....
ಈಗಾಗಲೆ ತಮಗೆಲ್ಲಾ ತಿಳಿದಿರುವಂತೆ.. ನಮ್ಮ ಸಂಘವು ತಮಗೆಲ್ಲರಿಗೂ ಉತ್ತಮ ಸೇವೆ ನೀಡುತ್ತಾ ಬಂದಿದ್ದು,
ಅದರ ಮುಂದುವರಿದ ಭಾಗವಾಗಿ ಈಗ 2021 ನೇ ಜನೆವರಿ ತಿಂಗಳಿನಿಂದ ನಮ್ಮ ಲಿಂಗಸೂಗೂರು ತಾಲ್ಲೂಕಿನ
ಎಲ್ಲಾ ವಲಯಗಳ ಸ್ಯಾಲರಿ ಸ್ಲಿಪ್ ಗಳನ್ನು ಹಾಗೂ ಇನ್ನಿತರೆ ಮಾಹಿತಿಗಳನ್ನು ಈ ಬ್ಲಾಗಿನಲ್ಲಿ ಹಂಚಿಕೊಳ್ಳಲಿದ್ದೇವೆ..
ನಿಮ್ಮ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ.. ಎಂದಿನಂತೆ ತಮ್ಮ ಸಹಕಾರವಿರಲಿ...
ಧನ್ಯವಾದಗಳು.
ಸದಾ ನಿಮ್ಮ ಸೇವೆಯಲ್ಲಿ.
ಶ್ರೀ ಗುರುಸಂಗಯ್ಯ ಗಣಾಚಾರಿ
ಅಧ್ಯಕ್ಷರು ಪ್ರಾ, ಶಾ,ಶಿ,ಸಂ, ಲಿಂಗಸೂಗೂರು
ಹಾಗೂ ಸರ್ವ ಸದಸ್ಯ ಮಂಡಳಿ.